ರಾಲ್ಫ್ ರಿಚರ್ಡ್ ಸನ್,' 'ಎಫ್. ಟಿ. ಐ'; ರವರು ಟರ್ನರ್ ಜೊತೆಯಲ್ಲೇ ೩, ನವೆಂಬರ್, ೧೯೨೪ ರಲ್ಲಿ, ಸ್ಪಿನ್ನಿಂಗ್ ಮಾಸ್ಟರ್ ಆಗಿ,'ಲ್ಯಾಬೊರೇಟೊರಿಗೆ ಸೇರಿದರು. ಅಪಾರ ಅನುಭವಿಗಳು. ಸನ್, ೧೮೯೯ ರಲ್ಲಿ 'ಇಂಗ್ಲೇಂಡ್ ನ ಕ್ಲರೆನ್ಸ್ ಮಿಲ್' ನಲ್ಲಿ ತಮ್ಮ ಕೆರಿಯರ್ ಆರಂಭಿಸಿದರು. 'ಕೆನಡಾದ ಮಾಂಟ್ರಿಯೆಲ್ ನ ಮಿಲ್' (೧೯೧೨) ಒಂದರಲ್ಲಿ, ನಂತರ 'ಓಲ್ಡ್ ಹ್ಯಾಮ್ ಕಾಲೇಜ್' ನಲ್ಲಿ 'ಡೆಮಾನ್ಸ್ಟ್ರೇಟರ್ ಆಗಿ', (೧೯೧೫-೧೬), ಭಾರತದ ಆಗ್ರನಗರದ,ಜಾನ್.ಅಂಡ್ ಕಂ,ಯಲ್ಲಿ ಸೇವೆ ಸಲ್ಲಿಸಿದ್ದರು. ಸನ್,(೧೯೧೬)ರಲ್ಲಿ, 'ಲ್ಯಾಬೊರೇಟೊರಿ'ಗೆ ಬರುವ ಮೊದಲು, ದಕ್ಷಿಣ ಭಾರತದ, 'ಕೋವಿಲ್ ಪಟ್ಟಿ'ಯ, ತಿನ್ನವೇಲಿ ಮಿಲ್ ನಲ್ಲಿ ದುಡಿದರು. == ಗೌರವ ಪ್ರಶಸ್ತಿಗಳು == 'ಟೆಕ್ನೊಲಾಜಿಕಲ್ ಲ್ಯಾಬೊರೇಟೊರಿ'ಯ ಬೆಳವಣಿಗೆಯ ದಿನಗಳಲ್ಲಿ ಡಾ. ಟರ್ನರ್ ಜೊತೆಯಲ್ಲಿ ಸೇರಿ, 'ಹತ್ತಿ ಸಂಶೋಧನೆಯ ಕಾರ್ಯ'ದಲ್ಲಿ ಬಹಳ ಮಹತ್ತರ ಕೊಡುಗೆಯನ್ನು ಕೊಟ್ಟಿದ್ದಾರೆ. ರಾಲ್ಫ್ ರಿಚರ್ಡ್ ಸನ್ ರವರು ತಮ್ಮ ಅನುಪಮ ಸೇವೆಯನ್ನು 'ಮ್ಯೂಲ್ ಕಾಪಿಂಗ್ ಮತ್ತು ಹತ್ತಿಯ ಹೈ ಡ್ರಾಫ್ಟಿಂಗ್ ವಲಯ'ದಲ್ಲಿ ಕೊಟ್ಟಿದ್ದಾರೆ. (' ') ಸುಮಾರು ೨೫ ವರ್ಷಗಳ ಸತತವಾದ 'ಮಿಲ್ ಸೇವೆಯ ಮೌಲಿಕ ಕಾರ್ಯ'ಗಳನ್ನು ಗುರುತಿಸಿ, 'ಮ್ಯಾಂಚೆಸ್ಟರ್ ನ ಟೆಕ್ಸ್ ಟೈಲ್ ಇನ್ ಸ್ಟಿ ಟ್ಯೂಟ್', ೧೯೩೦ ರಲ್ಲಿ, ಅವರಿಗೆ 'ಗೌರವ ಎಫ್.ಟಿ. ಐ. ಪ್ರಶಸ್ತಿ,'ಯನ್ನು ನೀಡಿ ಗೌರವಿಸಿತು.